Untitled Document
Sign Up | Login    
Dynamic website and Portals
  

Related News

ಲೆಫ್ಟಿನೆಂಟ್ ಗವರ್ನರವರೇ ದೆಹಲಿ ಆಡಳಿತಾತ್ಮಕ ಮುಖ್ಯಸ್ಥರುಃ ದೆಹಲಿ ಹೈಕೋರ್ಟ್

ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಮುಖ್ಯಸ್ಥರು. ಲೆಫ್ಟಿನೆಂಟ್ ಗವರ್ನರ್ ಮೂಲಕವೇ ಎಲ್ಲಾ ನಿರ್ಧಾರ ಅಂತಿಮವಾಗಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ. ದೆಹಲಿಯ ಆಡಳಿತದ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್...

ಕಂಪ್ಯೂಟರ್ ಖರೀದಿ ಹಗರಣ: ದೆಹಲಿ ಸಿಎಂ ಪ್ರಧಾನ ಕಾರ್ಯದರ್ಶಿ ಬಂಧನ

50 ಕೋಟಿ ರೂಪಾಯಿ ಕಂಪ್ಯೂಟರ್ ಖರೀದಿ ಹಗರಣದಲ್ಲಿ ನಡೆದ ಭ್ರಷ್ಟಾಚಾರ ಆರೋಪದಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ನಾಲ್ವರನ್ನು ಸಿಬಿಐ ಬಂಧಿಸಿದೆ. ಹಗರಣದ ಪ್ರಮುಖ ರಾಜೇಂದ್ರ ಕುಮಾರ್ ಎಂದು ಸಿಬಿಐ ಮೂಲಗಳು ತಿಳಿಸಿದ್ದು, ಕುಮಾರ್...

ದೆಹಲಿ ಅಸೆಂಬ್ಲಿಯೊಳಗೆ ಬೆಂಚ್ ಹತ್ತಿ ಪ್ರತಿಭಟಿಸಿದ ಶಾಸಕ

ಬಿಜೆಪಿ ಶಾಸಕರೊಬ್ಬರು ವಿಧಾನಸಭೆಯೊಳಗೆ ಬೆಂಚ್ ಹತ್ತಿ ಪ್ರತಿಭಟನೆ ನಡೆಸಿದ ಘಟನೆ ದೆಹಲಿ ಅಸೆಂಬ್ಲಿಯಲ್ಲಿ ನಡೆದಿದೆ. ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ವಿಜೇಂದ್ರ...

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ದಾಖಲು

ದೆಹಲಿ ಪಟಿಯಾಲ ನ್ಯಾಯಾಲಯದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಕೆಲವು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಇತರ ಕೆಲವು ಆಪ್...

ಕೇಜ್ರಿವಾಲ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಃ ಅರುಣ್ ಜೇಟ್ಲಿ ತಿರುಗೇಟು

ಡಿಡಿಸಿಎ ವಿವಾದದ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಜ್ರಿವಾಲ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಗುರುವಾರ ಆರೋಪ ಮಾಡಿ, ಅವರು ಅಸತ್ಯವನ್ನು ನಂಬಿ, ಉನ್ಮಾದದ ಅಂಚಿನಲ್ಲಿರುವ ಮಾತನಾಡುತ್ತಾರೆ ಎಂದರು. ಕೇಜ್ರಿವಾಲ್ ಗೆ ಬೆಂಬಲ...

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿಯ ಮೇಲೆ ಸಿಬಿಐ ದಾಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ. ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಸಿಬಿಐ, ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ. ಬೆಳಗ್ಗೆ ಕಚೇರಿಗೆ ಬಂದ ಕೇಜ್ರಿವಾಲ್ ಮತ್ತು ಇತರ ಆಮ್ ಆದ್ಮಿ ಪಕ್ಷದವರನು ಕಚೇರಿಯ ಒಳಗೆ ಪ್ರವೇಶಿಸದಂತೆ ಸಿಬಿಐ...

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಡಿ ಎಂದು ಹೇಳಿದ ಕೇಜ್ರಿವಾಲ್ ಕ್ಷಮೆ ಕೇಳಬೇಕುಃ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ 'ಹೇಡಿ' ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಮಂಗಳವಾರ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. 'ಹೇಡಿ' ಎಂಬ ಪದ ಬಳಕೆ ಮಾಡಿದ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆ ಕೇಳಬೇಕು, ಇದು ಅವಮಾನಕರ ಎಂದು...

ಸರಳ ಜೀವಿ, ಗಾಂಧಿವಾದಿ ಅಣ್ಣಾ ಹಜಾರೆಗೆ Z+ ರಕ್ಷಣೆ

ಕಳೆದ 10 ದಿನಗಳಲ್ಲಿ ಎರಡನೇ ಬಾರಿ ಜೀವ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ 'Z+' ರಕ್ಷಣೆ ನೀಡಲಾಗಿದೆ. ಸರಳ ಜೀವನ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ವಿರುದ್ಧ ಹೋರಾಟ ಮುಂತಾದ ವಿಷಯಗಳನ್ನು ಎತ್ತಿಕೊಂಡು...

ವಂಚನೆ, ನಕಲು ದಾಖಲೆ ಸೃಷ್ಟಿ: ದೆಹಲಿಯ ಆಪ್ ಶಾಸಕನ ಬಂಧನ

ಪಾರದರ್ಶಕ ಮತ್ತು ಪ್ರಾಮಾಣಿಕ ಆಢಳಿತ ನೀಡುತ್ತೇವೆ ಎಂಬ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ವಿವಾದಗಳಿಂದ ಸುದ್ದಿ ಮಾಡುತ್ತಲೇ ಬಂದಿದೆ. ಈಗ ವಂಚನೆ, ಹಾಗೂ ನಕಲು ದಾಖಲೆ ಸೃಷ್ಠಿಸಿ ಆಸ್ತಿ...

ಎಸಿಬಿ ಮುಖ್ಯಸ್ಥರ ನೇಮಕಾತಿ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ಸರ್ಕಾರ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಮುಖ್ಯಸ್ಥರಾಗಿ ಹಿರಿಯ ಪೊಲೀಸ್ ಅಧಿಕಾರಿ ಎಂ.ಕೆ.ಮೀನಾ ನೇಮಕ ಪ್ರಶ್ನಿಸಿ ದೆಹಲಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಸಿಬಿ ಮುಖ್ಯಸ್ಥರನ್ನಾಗಿ ಎಸ್‌.ಎಸ್.ಯಾದವ್ ಅವರನ್ನು ನೇಮಕ ಮಾಡಿದ್ದರು. ಆದಾಗ್ಯೂ ಜೂನ್ 9ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್...

ಆಪ್ ನ 21 ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ

ದೆಹಲಿಯ ಆಪ್ ನೇತೃತ್ವದ ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಆಪ್ ನ 21 ಶಾಸಕರ ವಿರುದ್ಧ 24 ಕ್ರಿಮಿನಲ್ ಪ್ರಕರಣಗಳು ಇದ್ದು, ಇದೀಗ ದೆಹಲಿ ಪೊಲೀಸರು ಆಪ್ ಶಾಸಕರ ವಿರುದ್ಧ ಚಾರ್ಜ್ ಶೀಟ್ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್...

ಆಪ್ ನಿಂದ ಜಿತೇಂದ್ರ ತೋಮರ್ ಉಚ್ಛಾಟನೆ ಸಾಧ್ಯತೆ

ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದಡಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನಕ್ಕೊಳಗಾಗಿರುವುದು ಆಪ್ ಪಕ್ಷದಲ್ಲಿ ಅಸಮಾಧಾನ ಉಂಟುಮಾಡಿದೆ. ಪ್ರಕರಣದಿಂದ ತೀವ್ರ ಆಕ್ರೋಶಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಿತೇಂದ್ರ ತೋಮರ್ ಅವರನ್ನು ಪಕ್ಷದಿಂದ...

ದೆಹಲಿ ಕಾನೂನು ಸಚಿವರಾಗಿ ಅಲಕಾ ಲಂಬಾ ನೇಮಕ ಸಾಧ್ಯತೆ

ನಕಲಿ ಕಾನೂನು ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಡಿಸಿಎಂ ಮನೀಶ್ ಸಿಸೋಡಿಯಾ, ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಲೆ.ಗವರ್ನರ್...

ತಾರಕಕ್ಕೇರಿದ ಕೇಜ್ರಿವಾಲ್-ನಜೀಬ್ ಜಂಗೀಕುಸ್ತಿ: ಎಸಿಬಿ ಮುಖ್ಯಸ್ಥರ ನೇಮಕಕ್ಕೆ ತಡೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಕಿತ್ತಾಟ ಮತ್ತೆ ತಾರಕಕ್ಕೇರಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯ ಮುಖ್ಯಸ್ಥರಿಗೆ ಅಧಿಕಾರ ವಹಿಸಿಕೊಳ್ಳದಂತೆ ಆಪ್ ಸರ್ಕಾರ ತಡೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಜೂ.8ರಂದು ದೆಹಲಿ...

ಪ್ರಧಾನಿ ಮೋದಿ ಎಎಪಿ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ: ಕೇಜ್ರಿವಾಲ್

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬಿಜೆಪಿಯ ಚುನಾವಣಾ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಎಎಪಿ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ...

ಪ್ರಧಾನಿ ಮೋದಿ ಜತೆ ಯೋಗಕ್ಕೆ ಸೋನಿಯಾ, ರಾಹುಲ್‌, ಕೇಜ್ರಿವಾಲ್‌ ಗೆ ಆಹ್ವಾನ

ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಆಹ್ವಾನ ನೀಡಿದೆ. ಅಲ್ಲದೆ, ಸಂಸತ್ತಿನ ಎಲ್ಲಾ...

ದೆಹಲಿಯಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ

ನೆಸ್ಲೆ ಕಂಪನಿಯ ಅತ್ಯಂತ ಜನಪ್ರಿಯ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು 15 ದಿನಗಳ ಕಾಲ ದೆಹಲಿ ಸರ್ಕಾರ ನಿಷೇಧಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಮ್ಯಾಗಿಯನ್ನು 15 ದಿನಗಳ ಕಾಲ ಮಾರಾಟ ಮಾಡದಂತೆ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿದೆ. ಮ್ಯಾಗಿ ನ್ಯೂಡಲ್ಸ್...

ಅಧಿಕಾರಿಗಳ ನೇಮಕ ವಿವಾದ: ಕೇಜ್ರಿವಾಲ್ ಹೈಕೋರ್ಟ್ ಗೆ, ಕೇಂದ್ರ ಸುಪ್ರೀಂಗೆ ಮೊರೆ

ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ ಗೆ ಅಧಿಕಾರಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ವಿರುದ್ಧ ಆಮ್ ಆದ್ಮಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ದೆಹಲಿ ಸಚಿವ ಸಂಪುಟದ ಸದಸ್ಯರ ನೆರವು ಹಾಗೂ ಸಲಹೆಯಂತೆ ಉಪರಾಜ್ಯಪಾಲರು...

ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್ ಜಾರಿ

ಭ್ರಷ್ಟಾಚಾರ ಪ್ರಕರಣಗಳಲ್ಲಿ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬಹುದು ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ...

ಅಧಿಕಾರಿಗಳ ನೇಮಕ ವಿವಾದ: ಗವರ್ನರ್ ಅಧಿಕಾರದ ಬಗ್ಗೆ ಅಧಿಸೂಚನೆ ಹೊರಡಿಸಿದ ಕೇಂದ್ರ

ದೆಹಲಿ ಉಪರಾಜ್ಯಪಾಲ ನಜೀಬ್‌ ಜಂಗ್‌ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡುವೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಹಕ್ಕಿಗಾಗಿ ನಡೆದಿರುವ ಜಟಾಪಟಿಯಲ್ಲಿ, ಕೇಂದ್ರ ಸರ್ಕಾರ ಅಧಿಕೃತವಾಗಿ ಜಂಗ್‌ ಅವರ ಪರವಹಿಸಿದೆ. ಶನಿವಾರ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿದ್ದು, ಪೊಲೀಸ್‌, ಸಾರ್ವಜನಿಕ...

ಮುಖ್ಯಕಾರ್ಯದರ್ಶಿ ನೇಮಕ ವಿವಾದ: ರಾಷ್ಟ್ರಪತಿ ಭೇಟಿಯಾದ ಕೇಜ್ರಿವಾಲ್

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇಮಕ ವಿವಾದ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದು, ಭೇಟಿಯ ವೇಳೆ ಲೆಪ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದ್ದಾರೆ. ನಜೀಬ್ ಜಂಗ್ ಸರ್ಕಾರದ ಕಾರ್ಯದರ್ಶಿಗಳ...

ಅಧಿಕಾರಿಗಳ ನೇಮಕ, ವರ್ಗಾವಣೆ ವಿವಾದ: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲ್ಲ- ರಾಜನಾಥ್

ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಸಮರ ತಾರಕಕ್ಕೇರಿದೆ. ಆಡಳಿತಾರೂಢ ಎಎಪಿ ಸರ್ಕಾರ ಕಳೆದ ನಾಲ್ಕು ದಿನಗಳಲ್ಲಿ ನೇಮಕ ಮಾಡಿದ್ದ ಅಧಿಕಾರಿಗಳ ವರ್ಗಾವಣೆಯನ್ನು ಲೆಫ್ಟಿನೆಂಟ್ ಗವರ್ನರ್ ಜಂಗ್ ಬುಧವಾರ...

ಕೇಜ್ರಿವಾಲ್ ಓರ್ವ ನಕ್ಸಲೈಟ್: ಸುಬ್ರಮಣಿಯನ್ ಸ್ವಾಮಿ

ಶಕುಂತಲಾ ಗಾಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ವಿಚಾರದಲ್ಲಿ ತಗಾದೆ ತೆಗೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಮೂತಃ ಓರ್ವ ನಕ್ಸಲೈಟಾಗಿದ್ದು ಅವರಿಗೆ ಆಡಳಿತ ನಡೆಸುವುದರಲ್ಲಿ ಆಸಕ್ತಿ ಇಲ್ಲವೆಂದು ಸುಬ್ರಮಣಿಯನ್...

ಮುಖ್ಯಕಾರ್ಯದರ್ಶಿ ನೇಮಕ ಅಧಿಕಾರ ಲೆ.ಗವರ್ನರ್ ಗೆ ಇಲ್ಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಕಾರ್ಯದರ್ಶಿ ನೇಮಕ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪರಾಜ್ಯಪಾಲ ನಜೀಬ್ ಜಂಗ್ ನಡುವೆ ಜಂಗೀಕುಸ್ತಿ ತಾರಕಕ್ಕೇರಿರುವ ನಡುವೆಯೇ ಸಂವಿಧಾನದ ಪ್ರಕಾರ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇಲ್ಲ ಎಂದು ಮಾಜಿ...

ದೆಹಲಿ: ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಶಕುಂತಲಾ ಗಾಮ್ಲಿನ್ ನೇಮಕ

ದೆಹಲಿಗೆ ಹಂಗಾಮಿ ಮುಖ್ಯ ಕಾರ್ಯದರ್ಶಿ ನೇಮಕ ಸಂಬಂಧ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಉಭಯ ನಾಯಕರು ಬಹಿರಂಗವಾಗಿಯೇ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ದೆಹಲಿಯ ಹಂಗಾಮಿ ಮುಖ್ಯಕಾರ್ಯದರ್ಶಿಯಾಗಿ ಶಕುಂತಲಾ ಗಾಮ್ಲಿನ್‌ ಅವರನ್ನು ರಾಜ್ಯಪಾಲರು...

ಕೇಜ್ರಿವಾಲ್ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆ

ತಮ್ಮ ಸರ್ಕಾರ ಹಾಗೂ ಸಚಿವರು, ಶಾಸಕರ ವಿರುದ್ಧ ವರದಿ ಬಿತ್ತರಿಸಿದರೆ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸುತ್ತೋಲೆಗೆ ಸುಪ್ರೀಂ...

ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಮೇಲೆ ನಿಗಾ ಇಡಲು ಆಪ್ ಸರ್ಕಾರ ಸೂಚನೆ

ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ತೀವ್ರ ನಿಗಾ ವಹಿಸಲು ಆಮ್ ಆದ್ಮಿ ಸರ್ಕಾರ ಮಾಹಿತಿ ಮತ್ತು ಪ್ರಸರಣ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ತಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಮಾಧ್ಯಮಗಳು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ ಬೆನ್ನಲ್ಲೇ ಈ...

ರ್ಯಾಲಿಯಲ್ಲಿ ರೈತನ ಆತ್ಮಹತ್ಯೆ ಪ್ರಕರಣ: ಕ್ಷಮೆ ಯಾಚಿಸಿದ ಕೇಜ್ರಿವಾಲ್

ತಮ್ಮ ಪಕ್ಷ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ಷಮೆಯನ್ನೂ ಕೋರಿದ್ದಾರೆ. ರೈತ ನೇಣು ಬಿಗಿದುಕೊಂಡಿದ್ದರೂ ಅರವಿಂದ್ ಕೇಜ್ರಿವಾಲ್ ತಮ್ಮ ಭಾಷಣವನ್ನೇ ಮುಂದುವರೆಸುತ್ತಿದ್ದರು...

ಭೂಸ್ವಾಧೀನ ಮಸೂದೆ ವಿರುದ್ಧ ಆಪ್ ಪ್ರತಿಭಟನೆ

ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ ವಿರೋಧಿಸಿ ಆಮ್ ಆದ್ಮಿ ಪಕ್ಷ ದೆಹಲಿಯ ಜಂತರ್-ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳದಿಂದ ಮಾಧ್ಯಮಗಳನ್ನು ದೂರುವಿಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರದ ವಿರುದ್ಧ ತೀವ್ರ...

ಕೇಜ್ರಿವಾಲ್ ನ್ಯೂ ಹಿಟ್ಲರ್: ಭೂಷಣ್, ಯಾದವ್ ವಾಗ್ದಾಳಿ

ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ನಿಜ ಬಣ್ಣ ಗುರುತಿಸದೆ ನಾವು ದೊಡ್ಡ ತಪ್ಪು ಮಾಡಿದೆವು ಎಂದು ಎಎಪಿಯಿಂದ ಉಚ್ಚಾಟಿಸಲ್ಪಟ್ಟ ಸ್ಥಾಪಕ ಮುಖಂಡರಾದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಶಾಣ್ತ್...

ಅರವಿಂದ್ ಕೇಜ್ರಿವಾಲ್ ಓರ್ವ ಹೇಡಿ: ದೇವನೂರು ಮಹಾದೇವ

ತೀವ್ರ ಬಂಡಾಯದ ಬಿಸಿಯನ್ನು ಎದುರಿಸುತ್ತಿರುವ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಪಕ್ಷದ ಸದಸ್ಯರು ಮಾತ್ರವಲ್ಲದೇ ಪ್ರಗತಿಪರ ಸಾಹಿತಿಗಳೂ ತಿರುಗಿಬಿದ್ದಿದ್ದಾರೆ. ಪ್ರಸ್ತುತ ಇರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾದ ಪಕ್ಷ ಅಸ್ಥಿತ್ವಕ್ಕೆ ಬರಬೇಕೆಂಬ ಅಭಿಪ್ರಾಯ ಹೊಂದಿದ್ದ ಸಾಹಿತಿ ದೇವನೂರು ಮಹಾದೇವ ಅವರೂ...

ಮೋದಿ ಮಾದರಿಗಿಂತ ನನ್ನ ಮಾದರಿಯ ಆಡಳಿತವೇ ಉತ್ತಮ: ಕೇಜ್ರಿವಾಲ್‌

ಪ್ರಧಾನಿ ನರೇಂದ್ರ ಮೋದಿ ಮಾದರಿಯ ಆಡಳಿತಕ್ಕಿಂತ ನನ್ನ ಮಾದರಿಯ ಆಡಳಿತವೇ ಉತ್ತಮವೆಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಪ್ರಧಾನಿ ಮೋದಿಯವರದ್ದು ವ್ಯಕ್ತಿ ಕೇಂದ್ರಿತ ಆಡಳಿತ ಮಾದರಿಯಾದರೆ ತನ್ನದು ಜನಕೇಂದ್ರಿತ ಆಡಳಿತ ಮಾದರಿ ಆಗಿದೆ ಎಂದು ಕೇಜ್ರಿವಾಲ್‌...

ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ: ಕೇಜ್ರಿವಾಲ್ ರಿಂದ ಸಹಾಯವಾಣಿಗೆ ಚಾಲನೆ

ನವದೆಹಲಿಯಲ್ಲಿ ಯಶಸ್ವಿ 50 ದಿನಗಳ ಆಡಳಿತ ಪೂರ್ಣಗೊಳಿಸಿರುವ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದೆ. ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪಿಡುಗನ್ನು ತೊಡೆದುಹಾಕಲು ಮುಖ್ಯಮಂತ್ರಿ ಕೇಜ್ರಿವಾಲ್ 1031 ಸಂಖ್ಯೆಯ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ. ಇದರ...

ದೆಹಲಿಯಲ್ಲಿ ಏಪ್ರಿಲ್ ಫೂಲ್ ದಿನವನ್ನು ಕೇಜ್ರಿವಾಲ್ ದಿನವನ್ನಾಗಿ ಆಚರಣೆ

'ಏಪ್ರಿಲ್' ಮೊದಲನೇ ದಿನವನ್ನು ಮೂರ್ಖರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ಮಾತ್ರ ಮೂರ್ಖರ ದಿನವನ್ನು ಅರವಿಂದ್ ಕೇಜ್ರಿವಾಲ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ದೆಹಲಿ ನಗರಾದ್ಯಂತ ಅರವಿಂದ್ ಕೇಜ್ರಿವಾಲ್ ಭಾವಚಿತ್ರವನ್ನೊಳಗೊಂಡ ಪೋಸ್ಟರ್ ಗಳನ್ನು ಹಾಕಿರುವ ಭಗತ್ ಸಿಂಗ್ ಕ್ರಾಂತಿ ಸೇನೆ ಸಂಘಟನೆ, ಮೂರ್ಖರ...

ಬಿಜೆಪಿ ಹೆಸರಲ್ಲಿ ಆಪ್ ನಕಲಿ ಕರೆ: 10 ಕೋಟಿ ರೂ.ಆಮಿಷ - ರಾಜೇಶ್ ಗಾರ್ಗ್

ಆಮ್ ಆದ್ಮಿ ಪಕ್ಷದ ಶಾಸಕರು ಬಿಜೆಪಿ ಹೆಸರಲ್ಲಿ ನಕಲಿ ದೂರವಾಣಿ ಕರೆ ಮಾಡುತ್ತಿದ್ದು, ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮತಿಯೂ ಇದ್ದಿರುವುದಾಗಿ ಎಎಪಿ ಮಾಜಿ ಶಾಸಕ ರಾಜೇಶ್ ಗಾರ್ಗ್ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಸರ್ಕಾರ ರಚನೆಯ ಕಸರತ್ತಿನ...

ಮನೀಷ್ ಸಿಸೋಡಿಯಾಗೆ ಮನೆ ಖಾಲಿ ಮಾಡಲು ಸೂಚಿಸಿದ್ದ ಅಧಿಕಾರಿ ವರ್ಗಾವಣೆ

ಈ ಹಿಂದೆ ಅಸ್ಥಿತ್ವದಲ್ಲಿದ್ದ 49 ದಿನಗ ಆಪ್ ಸರ್ಕಾರ ಪತನವಾದ ನಂತರ ಮನೆಯನ್ನು ತೆರವುಗೊಳಿಸುವಂತೆ ಮನೀಷ್ ಸಿಸೋಡಿಯಾಗೆ ಸೂಚಿಸಿದ್ದ ಅಧಿಕಾರಿಯನ್ನು ಆಪ್ ಸರ್ಕಾರ ವರ್ಗಾವಣೆ ಮಾಡಿದೆ. ಕಳೆದ ವರ್ಷ 49 ದಿನಗಳ ಸರ್ಕಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಸಿ.ಎಂ ಸ್ಥಾನಕ್ಕೆ ರಾಜೀನಾಮೆ...

ಆಪ್ ತೊರೆದು ಹೊಸ ಪಕ್ಷ ಕಟ್ಟುವೆ: ಕೇಜ್ರಿವಾಲ್‌ ಬೆದರಿಕೆ ಆಡಿಯೋ ಟೇಪ್ ಬಿಡುಗಡೆ

ಆಮ್‌ ಆದ್ಮಿ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ತಾರಕ್ಕಕ್ಕೆ ಏರಿವೆ. ಕೆಲ ದಿನಗಳ ಹಿಂದೆ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದ ವಿರೋಧಿ ಬಣಗಳು ಇದೀಗ ಆಮ್‌ ಆದ್ಮಿ ಪಕ್ಷವನ್ನೇ ತೊರೆದು ಹೊಸ ಪಕ್ಷ ಕಟ್ಟುತ್ತೇನೆಂದು ಅರವಿಂದ್ ಕೇಜ್ರಿವಾಲ್‌ ಹೇಳಿಕೆ...

ರಾಜಕೀಯ ಅಪಕ್ವತೆಗೆ ಆಪ್ ಬಲಿಯಾಗಬಾರದು: ಅರುಣ್ ಜೇಟ್ಲಿ

ಆಮ್ ಆದ್ಮಿ ಪಕ್ಷದ ಸರ್ಕಾರ 'ರಾಜಕೀಯ ಅಪಕ್ವತೆ'ಗೆ ಬಲಿಯಾಗಿ ದೆಹಲಿ ಜನರ ಸೇವೆಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಜನರು ಬಹಳಷ್ಟು ನಿರೀಕ್ಷೆಯಿಂದ ಈ ಸರ್ಕಾರಕ್ಕೆ ಮತ ಹಾಕಿದರು. ಅವರು ತಮ್ಮ ಚುನಾಣಾ ವಚನಗಳನ್ನು...

ಪ್ರಶಾಂತ್ ಭೂಷಣ್ ಹಾಗೂ ಕೇಜ್ರಿವಾಲ್ ಬಣದ ಮಾತುಕತೆ ವಿಫಲ

ಆಮ್‌ ಆದ್ಮಿ ಪಕ್ಷದಲ್ಲಿನ ಬಂಡಾಯ ತಣಿಸಲು ಭಿನ್ನಮತೀಯ ನಾಯಕರಾದ ಪ್ರಶಾಂತ್ ಭೂಷಣ್‌, ಯೋಗೇಂದ್ರ ಯಾದವ್‌ ಬಣ ಮತ್ತು ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಣದ ಮಧ್ಯೆ ನಡೆದ ಸಂಧಾನ ಮಾತುಕತೆಗಳು ಮುರಿದು ಬಿದ್ದಿವೆ. ಸಭೆಯ ಬಳಿಕ ಕೇಜ್ರಿವಾಲ್‌ ಗೆ ಪತ್ರ ಬರೆದಿರುವ ಯಾದವ್...

ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಯೋಗೇಂದ್ರ ಯಾದವ್, ಭೂಷಣ್ ಆರೋಪ

'ಆಮ್ ಆದ್ಮಿ ಪಕ್ಷ'ದ ಆಂತರಿಕ ಭಿನ್ನಮತ ಉಲ್ಭಣಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಮಾ.27ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್, ಅರವಿಂದ್ ಕೇಜ್ರಿವಾಲ್ ಅವರ...

ಆಮ್ ಆದ್ಮಿ ಪಕ್ಷಕ್ಕೆ ಪ್ರಶಾಂತ್ ಭೂಷಣ್ ರಾಜೀನಾಮೆ

ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ನಾಯಕ ಪ್ರಶಾಂತ್ ಭೂಷಣ್ ಅವರು ಬುಧವಾರ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಶಮನಕ್ಕಾಗಿ ಮಾ.17ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ವಿರುದ್ಧವೇ ಬಂಡಾಯವೆದ್ದಿದ್ದ ಪ್ರಶಾಂತ್ ಭೂಷಣ್ ಹಾಗೂ ಯೇಗೇಂದ್ರ ಯಾದವ್...

ಯೋಗೇಂದ್ರ ಯಾದವ್ ಭೇಟಿ ಮಾಡಿದ ಆಪ್ ನಾಯಕರು

ಆಮ್ ಆದ್ಮಿ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಯೋಗೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹಿಂದಿರುಗಿದ ಕೆಲವೇ ಘಂಟೆಗಳಲ್ಲಿ ನಡೆದಿದೆ.ಎರಡು ಬಣಗಳು...

ಮಾನನಷ್ಟ ಮೊಕದ್ದಮೆ ಪ್ರಕರಣ: ಕೇಜ್ರಿವಾಲ್ ಗೆ ಕೋರ್ಟ್ ಗೆ ಹಾಜರಾಗಲು ಸೂಚನೆ

ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ಗೈರು ಹಾಜರಾಗುತ್ತಿರುವುದಕ್ಕೆ ಕಿಡಿಕಾಡಿರುವ ದೆಹಲಿ ನ್ಯಾಯಾಲಯ, ಮಧ್ಯಾಹ್ನ 2 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಗೆ ಸೂಚಿಸಿದೆ. ಅಲ್ಲದೇ, ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಎಎಪಿ ನಾಯಕ ಯೋಗೇಂದ್ರ ಯಾದವ್...

ರಿಮೋಟ್‌ ಕಂಟ್ರೋಲ್‌ ನಾನಲ್ಲ: ಮನೀಶ್ ಸಿಸೋಡಿಯಾ

ನಾನು ಹಂಗಾಮಿ ಮುಖ್ಯಮಂತ್ರಿಯಾಗಿದ್ದರೂ ಸಹ ಮೈಕ್‌ ಮತ್ತು ರಿಮೋಟ್‌ ಕಂಟ್ರೋಲ್‌ ಬೇರೆಯವರ (ಕೇಜ್ರಿವಾಲ್‌) ಬಳಿ ಇಲ್ಲ. ಅದು ನನ್ನ ಹತ್ತಿರವೇ ಇದೆ ಎಂದು ಅರವಿಂದ್ ಕೇಜ್ರಿವಾಲ್‌ ಅನುಪಸ್ಥಿತಿಯಲ್ಲಿ ರಾಜ್ಯಭಾರದ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ. ಆಡಳಿತ ನನ್ನ ನಿಯಂತ್ರಣದಲ್ಲಿದ್ದು,...

ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ರಾಜೇಶ್ ಗರ್ಗ್ ಉಚ್ಛಾಟನೆ

'ಆಮ್ ಆದ್ಮಿ ಪಕ್ಷ'ದಿಂದ ಮಾಜಿ ಶಾಸಕ ರಾಜೇಶ್ ಗರ್ಗ್ ನನ್ನು ಉಚ್ಛಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾರಣ ಆಪ್ ಪಕ್ಷ ಈ ಕ್ರಮ ಕೈಗೊಂಡಿದೆ. ನವದೆಹಲಿಯ ರೋಹಿಣಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜೇಶ್ ಗರ್ಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಅರವಿಂದ್ ಕೇಜ್ರಿವಾಲ್ ಗುಣಮುಖ: ಸಂಜೆ ದೆಹಲಿಗೆ ವಾಪಸ್

ಕಳೆದ 12 ದಿನಗಳಿಂದ ಕೆಮ್ಮು ಮತ್ತು ಮಧುಮೇಹ ಕಾಯಿಲೆಗೆ ತುಮಕೂರು ರಸ್ತೆ ಬಳಿ ಇರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸಂಜೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ...

ಕೇಜ್ರಿವಾಲ್ ಚೇತರಿಕೆ: ಮಾ.16ರಂದು ದೆಹಲಿಗೆ ವಾಪಸ್

ಕೆಮ್ಮು ಮತ್ತು ಮಧುಮೇಹಕ್ಕೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುಣಮುಖರಾಗಿದ್ದು, ಮಾ.16 ರಂದು ಆಸ್ಪತ್ರೆಯಿಂದ ಡಿಸ್‌ ಚಾರ್ಜ್ ಆಗಲಿದ್ದಾರೆ. ಕೆಮ್ಮು ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಂದಿದೆ. ಸೋಮವಾರದ ವೇಳೆಗೆ ಸಂಪೂರ್ಣ ಗುಣಮುಖರಾಗಲಿದ್ದು, ಅಂದು...

ದೆಹಲಿ ಸಿ.ಎಂ ಕೇಜ್ರಿವಾಲ್ ವಿರುದ್ಧ ಮತ್ತೊಂದು ಆಡಿಯೋ ಟೇಪ್ ಬಿಡುಗಡೆ

ದಿನದಿಂದ ದಿನಕ್ಕೆ ಆಮ್ ಆದ್ಮಿ ಪಕ್ಷದಲ್ಲಿ ಹೊಸ ಆರೋಪಗಳು ಕೇಳಿಬರುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಖರೀದಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಮುಸ್ಲಿಮರಿಗೆ ಆಪ್ ಪಕ್ಷವೊಂದೇ ಪರ್ಯಾಯ ದಾರಿ ಎಂದು ಕೇಜ್ರಿವಾಲ್ ಹೇಳಿರುವ...

ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿದ್ದ ಆಮ್ ಮಾಜಿ ಶಾಸಕನಿಗೆ ಬೆದರಿಕೆ ಕರೆ!

'ಆಮ್ ಆದ್ಮಿ ಪಕ್ಷ'ದ ಅಭಿಮಾನಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪ್ ನ ಮಾಜಿ ಶಾಸಕ ರಾಜೇಶ್ ಗರ್ಗ್ ಆರೋಪಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ ಆರೋಪ ಹೊರಿಸಿದ್ದ ಹಿನ್ನೆಲೆಯಲ್ಲಿ ತಮಗೆ...

5 ರೂಮ್ ಗಳನ್ನೊಳಗೊಂಡ ಐಷಾರಾಮಿ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿರುವ ಕೇಜ್ರಿವಾಲ್

ಬೆಂಗಳೂರಿನ ಜಿಂದಾಲ್ ಪ್ರಕೃತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಂದಿನ ವಾರದಿಂದ ದೆಹಲಿಯಲ್ಲಿ 5 ರೂಂಗಳನ್ನೊಳಗೊಂಡ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಿವಿಲ್ ಲೈನ್ಸ್ ನಲ್ಲಿರುವ ಬಂಗಲೆಯಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳೂ ಬಹುತೇಕ ಪೂರ್ಣಗೊಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ...

ಎ.ಎ.ಪಿ ಸೋಲಿಗೆ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ತಂತ್ರ ರೂಪಿಸಿದ್ದರು

'ಆಮ್ ಆದ್ಮಿ ಪಕ್ಷ'ದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ಮೂವರು ನಾಯಕರ ಜಾತಕ ಬಯಲಾಗಿದೆ. ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ಅವರು ಕೆಲಸ ಮಾಡಿದ್ದರು ಎಂದು ಎಎಪಿಯ...

ಯಾದವ್‌, ಭೂಷಣ್‌ಗೆ ಬೆಂಬಲವಾಗಿ ಆಪ್‌ ಆನ್‌ ಲೈನ್‌ ಸಹಿ ಸಂಗ್ರಹ ಅಭಿಯಾನ

ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಪಕ್ಷದ ಹಿರಿಯ ಸ್ಥಾಪಕ ಸದಸ್ಯರಾದ ಪ್ರಶಾಂತ್‌ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಹೊರ ಹಾಕುವುದನ್ನು ವಿರೋಧಿಸಿ ಇದೀಗ ಆನ್‌ ಲೈನ್‌ ಸಹಿ ಸಂಗ್ರಹ ಅಭಿಯಾನ ಭರದಿಂದ ಸಾಗುತ್ತಿದ್ದು ಕನಿಷ್ಠ 10,000 ಸಹಿ...

ಕೆಮ್ಮಿಗೆ ಚಿಕಿತ್ಸೆ: ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ ಕೇಜ್ರಿವಾಲ್

ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಗೆ ರಾಜ್ಯ ಸರ್ಕಾರದಿಂದ 2...

ಯೋಗೇಂದ್ರ ಯಾದವ್; ಪ್ರಶಾಂತ್ ಭೂಷಣ್ ಬಂಡಾಯ ಶಮನ

ಅರವಿಂದ್ ಕೇಜ್ರಿವಾಲ್‌ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಕಾರಣಕ್ಕೆ ತಮ್ಮನ್ನು ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾಗೊಳಿಸ ಬಹುದು ಎಂಬ ವರದಿಗಳ ಬೆನ್ನಲ್ಲೇ ಹಿರಿಯ ಮುಖಂಡರಾದ ಯೋಗೇಂದ್ರ ಯಾದವ್‌ ಹಾಗೂ ಪ್ರಶಾಂತ್‌ ಭೂಷಣ್‌ ಮೆತ್ತಗಾಗಿದ್ದಾರೆ. ಈ ನಡುವೆ ಇಬ್ಬರೂ ಭಿನ್ನಮತೀಯ ನಾಯಕರು...

ಅರವಿಂದ್ ಕೇಜ್ರಿವಾಲ್‌ ಆಪ್‌ ನ ಭರವಸೆಯ ಪ್ರತೀಕ: ಯೋಗೇಂದ್ರ ಯಾದವ್‌

ಆಮ್‌ ಆದ್ಮಿ ಪಕ್ಷದ ನಾಯಕರೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಅದಕ್ಕೆ ತೇಪೆ ಹಾಕುವ ಪ್ರಯತ್ನಗಳೂ ನಡೆಯುತ್ತಿವೆ. ಈ ನಡುವೆ ಭಿನ್ನಮತೀಯ ನಾಯಕ ಯೋಗೇಂದ್ರ ಯಾದವ್‌ ಅವರು ಅರವಿಂದ್ ಕೇಜ್ರಿವಾಲ್ ಆಪ್‌ನ ಭರವಸೆಯ ಪ್ರತೀಕವಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಬಗೆಯ ಭಿನ್ನಮತದ ಅಗ್ನಿ...

ಆಮ್ ಆದ್ಮಿ ಪಕ್ಷದ ಸಂಚಾಲಕ ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆ

'ಆಮ್ ಆದ್ಮಿ ಪಕ್ಷ'ದಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದರ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ. ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ್ ಕೇಜ್ರಿವಾಲ್, ತಾವು, ದೆಹಲಿ ಸರ್ಕಾರದ ಬಗ್ಗೆ ಮಾತ್ರ ಗಮನ...

ಆಪ್‌ ನಲ್ಲಿ ಭಿನ್ನಮತ : ಭೂಷಣ್‌, ಯಾದವ್‌ ತಲೆದಂಡ ಸಾಧ್ಯತೆ

ಆಂತರಿಕ ಸಂಘರ್ಷದಿಂದ ತತ್ತರಿಸುತ್ತಿರುವ ಆಮ್‌ ಆದ್ಮಿ ಪಕ್ಷ ಭಿನ್ನಮತೀಯ ನಾಯಕರಾದ ಪ್ರಶಾಂತ ಭೂಷಣ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಬುಧವಾರ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾ ಮಾಡುವ ಸಾಧ್ಯತೆ ಇದೆ. ಯಾದವ್‌ ಮತ್ತು ಭೂಷಣ್‌ ಆಪ್‌ ಸಂಚಾಲಕ ಹುದ್ದೆಯಿಂದ ದೆಹಲಿ ಮುಖ್ಯಮಂತ್ರಿ...

ಆಪ್ ನಲ್ಲಿ ಒಳಜಗಳದಿಂದ ತುಂಬಾ ನೋವಾಗಿದೆ: ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ಕುರಿತು ಮೌನ ಮುರಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದಲ್ಲಿನ ಬೆಳವಣಿಗೆಗಳಿಂದ ತೀವ್ರ ದು:ಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, "ಪಕ್ಷದಲ್ಲಿನ ಬೆಳವಣಿಗೆಗಳನ್ನು ಕಂಡು ನನಗೆ ಆಘಾತವಾಗಿವೆ...

ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ: ಎಲ್‌.ರಾಮದಾಸ್‌

ಆಮ್‌ ಆದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್‌ ಅವರನ್ನು ವಜಾಮಾಡಬೇಕು ಎಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ, ಪಕ್ಷದ ಆಂತರಿಕ ಲೋಕಪಾಲ ಅಡ್ಮಿರಲ್‌ ಎಲ್‌.ರಾಮದಾಸ್‌ ಅವರು ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಪತ್ರ ಬರೆದಿದ್ದಾರೆ. ಪಕ್ಷದ ಮುಖಂಡರಿಗೆ ಇ-ಮೇಲ್‌ ಮೂಲಕ...

ಆಪ್‌ ನಲ್ಲಿ ಭಿನ್ನಮತ: ಮಾರ್ಚ್‌ 4 ರಂದು ಕಾರ್ಯಕಾರಿಣಿ ಸಭೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಪಕ್ಷದಲ್ಲಿ ಇದೀಗ ತೀವ್ರ ಭಿನ್ನಮತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮಾರ್ಚ್‌ 4 ರಂದು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದೆ. ಆಪ್‌ ವಕ್ತಾರ ಸಂಜಯ್‌ ಸಿಂಗ್‌ ಸುದ್ದಿಗೋಷ್ಠಿ ನಡೆಸಿ...

ದೆಹಲಿ ಜನತೆಗೆ ಆಪ್ ಸರ್ಕಾರದ ಭಾರೀ ಕೊಡುಗೆ: ವಿದ್ಯುತ್‌ ಶುಲ್ಕ ಕಡಿತ, ನೀರು ಉಚಿತ

ಅರವಿಂದ್ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿದ್ಯುತ್‌ ಶುಲ್ಕ ಕಡಿತ ಹಾಗೂ ಉಚಿತ ಕುಡಿಯುವ ನೀರು ಪೂರೈಕೆ ಸಂಬಂಧ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. 400 ಯೂನಿಟ್‌ ವರೆಗೆ ಬಳಸಲಾಗುವ ವಿದ್ಯುತ್ತಿಗೆ ಇನ್ನು ಮುಂದೆ ದೆಹಲಿ ಜನರು ಸದ್ಯ...

ಎಎಪಿ ಸರ್ಕಾರ ಬೋಗಸ್ ಆದೇಶ ನೀಡುತ್ತಿದೆ: ಬಿಜೆಪಿ

ಆಮ್ ಆದ್ಮಿ ಪಕ್ಷ ಸರ್ಕಾರ ಬೋಗಸ್ ಆದೇಶ ನೀಡುತ್ತಿದೆ. ಜೆಜೆ ಕ್ಲಸ್ಟರ್ಸ್(ಸ್ಲಂ ಪ್ರದೇಶ) ಧ್ವಂಸ ಕಾರ್ಯ ಮುಂದುವರೆದಿದೆ ಹಾಗೂ ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಶಾಸಕಾಂಗ ನಾಯಕ ವಿಜೇಂದರ್ ಗುಪ್ತ ಆರೋಪಿಸಿದ್ದಾರೆ. ದೆಹಲಿ ಶಾಸಕಾಂಗ ಅಧಿವೇಶನದಲ್ಲಿ ಭಾಷಣ ಮಾಡಿದ...

ಮದರ್ ತೆರೇಸಾ ಸೇವೆ ಹಿಂದೆ ಮತಾಂತರ ಹುನ್ನಾರ: ಭಾಗವತ್‌

ಮದರ್ ತೆರೇಸಾ ಅವರು ಬಡವರಿಗೆ ಮಾಡಿದ ಸೇವೆಯ ಹಿಂದಿನ ಉದ್ದೇಶ ಮತಾಂತರವಾಗಿತ್ತು ಎಂದು ಆರ್.ಎಸ್‌.ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ. ರಾಜಸ್ತಾನದ ಭರತ್ ಪುರದಲ್ಲಿ ಅಪ್ನಾ ಘರ್ ಎಂಬ ಎನ್‌.ಜಿ.ಒ ಆಯೋಜಿಸಿದ್ದ ಮದರ್ ತೆರೇಸಾ ಅವರ ಸೇವೆ ಉತ್ತಮವಾದುದು. ಆದರೆ ಅದರ...

ಭೂಸ್ವಾಧೀನ ವಿರೋಧಿ ಆಂದೋಲನ: ಅಣ್ಣಾ ಹಜಾರಗೆ ಕೇಜ್ರಿವಾಲ್ ಸಾಥ್

ವಿವಾದಾತ್ಮಕ ಭೂಸ್ವಾಧೀನ ಮಸೂದೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿರುವ ಹಿರಿಯ ಸಮಾಜಸೇವಕ, ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಾಥ್ ನೀಡಿದ್ದಾರೆ. ಕೇಜ್ರಿವಾಲ್ ತಮ್ಮ 66 ಶಾಸಕರೊಡಗೂಡಿ ಅಣ್ಣಾ ರಜಾರೆ ನಡೆಸುತ್ತಿರುವ ಆಂದೋಲನವನ್ನು ಸೇರಿಕೊಂಡಿದ್ದಾರೆ....

ಭೂ ಸ್ವಾಧೀನ ಸುಗ್ರೀವಾಜ್ನೆ ವಿರುದ್ಧ ಅಣ್ಣಾ ಹಜಾರೆ ಧರಣಿ: ಆಮ್ ಆದ್ಮಿ ಪಕ್ಷದಿಂದ ಬೆಂಬಲ

'ಭೂ ಸ್ವಾಧೀನ ಸುಗ್ರೀವಾಜ್ನೆ' ವಿರುದ್ಧ ಧರಣಿ ನಡೆಸುತ್ತಿರುವ ಅಣ್ಣಾ ಹಜಾರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ. ವಿರೋಧ ಪಕ್ಷಗಳ ವಿರೋಧದ ನಡುವೆಯೂ...

ಗುತ್ತಿಗೆ ನೌಕರರ ಸೇವೆ ರದ್ದತಿಗೆ ಕೇಜ್ರಿವಾಲ್ ತಡೆ

ವಿದ್ಯುತ್‌ ದರವನ್ನು ಶೇ.50ರಷ್ಟು ಇಳಿಸುವ ಕುರಿತು ವರದಿ ನೀಡಿ ಎಂದು ಸೂಚನೆ ನೀಡಿದ ಬೆನ್ನಲ್ಲೇ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಆಮ್‌ ಆದ್ಮಿ ಪಕ್ಷ, ತನ್ನ ಪ್ರಣಾಳಿಕೆಯಲ್ಲಿನ ಮತ್ತೂಂದು ಭರವಸೆಯನ್ನು ಈಡೇರಿಸಿದೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1 ಲಕ್ಷ ಗುತ್ತಿಗೆ...

ಕೇಜ್ರಿವಾಲ್ ರ ಕೆಮ್ಮಿಗೆ ಬೆಂಗಳೂರಿನ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯಲು ಮೋದಿ ಸಲಹೆ

ಕಳೆದ ಕೆಲವು ದಿನಗಳಿಂದ ತೀವ್ರ ಕೆಮ್ಮಿನಿಂದ ಬಳಲುತ್ತಿರುವ ದೆಹಲಿಯ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಗಳೂರು ಮೂಲದ ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಅಟ್ ಹೋಮ್ ಕಾರ್ಯಕ್ರಮದಲ್ಲಿ ದೆಹಲಿ ಪೊಲೀಸ್ ಆಯುಕ್ತ...

ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಕ್ಷಣಗಣನೆ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿದ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಅವರು ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಹಿನ್ನೆಲೆಯಲ್ಲಿ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್‌...

ದೆಹಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ 2ನೇ ಬಾರಿ ಪ್ರಮಾಣ ವಚನ ಸ್ವೀಕಾರ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಎಯಲ್ಲಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ 2ನೇ ಬಾರಿಗೆ ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ...

ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮೊದಲ ರಾಜ್ಯ ಮಾಡುತ್ತೇವೆ: ಸಿಎಂ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್, ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮೊದಲ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಮ್ ಲೀಲಾ ಮೈದಾನದಲ್ಲಿ ಪದಗ್ರಹಣ ಮಾಡಿದ ಬಳಿಕ ದೆಹಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ಜನತೆ ಮತ್ತು ದೇವರು ಈ ಬಾರಿ...

ಆಪ್ ಸರ್ಕಾರದ ಮೊದಲ ಸಂಪುಟ ಸಭೆ ರದ್ದು

ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ರದ್ದಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್‌ ಅನಾರೋಗ್ಯದಿಂದ ಬಳತ್ತಿರುವ ಕಾರಣ ಸಂಜೆ 4ಗಂಟೆಗೆ ನಡೆಯ ಬೇಕಾಗಿದ್ದ ಸಂಪುಟ ಸಭೆಯನ್ನು ರದ್ದು ಮಾಡಲಾಗಿದೆ. ರದ್ದಾದ ಸಂಪುಟ ಸಭೆ ಸೋಮವಾರ...

ಕೇಜ್ರಿವಾಲ್ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ

ದೆಹಲಿಯ 8ನೇ ಮುಖ್ಯಮಂತ್ರಿಯಾಗಿ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಈ ಕುರಿತು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ದೆಹಲಿಯ ಮೊದಲ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ಅವರು ತಮ್ಮ...

ಗಾಂಧಿಯನ್ನು ಕೊಂದವರು ನಾವು, ಕೇಜ್ರಿವಾಲ್‌ ಅವರನ್ನೂ ಕೊಲ್ಲುತ್ತೇವೆ- ಸ್ವಾಮಿ ಓಂ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಆಮ್‌ ಆದ್ಮಿ ಪಕ್ಷವು ಅಭೂತಪೂರ್ವ ಗೆಲುವು ದಾಖಲಿಸಿರುವುದನ್ನು ದೇಶಕ್ಕೆ ದೇಶವೇ ಅಚ್ಚರಿಯಿಂದ ನೋಡುತ್ತಿದ್ದರೆ ಇಲ್ಲೊಬ್ಬ ಹಿಂದೂ ಮಹಾಸಭಾ ಮುಖಂಡ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಮುಂಬರುವ ದಿನಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕೊಲ್ಲುವುದಾಗಿ ಬಹಿರಂಗ...

ಅರವಿಂದ್ ಕೇಜ್ರಿವಾಲ್ ನಿಕಟವರ್ತಿ ಮನೀಶ್ ಸಿಸೋಡಿಯಾ ದೆಹಲಿ ಉಪಮುಖ್ಯಮಂತ್ರಿ

'ಆಮ್ ಆದ್ಮಿ ಪಕ್ಷ'ದ ಪ್ರಮುಖ ನಾಯಕರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧಗೊಂಡಿದ್ದಾರೆ. ಯಾವ ನಾಯಕರು ಆಮ್ ಆದ್ಮಿ ಸರ್ಕಾರದ ಭಾಗವಾಗಿರಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇತ್ತೀಚಿನ ವರದಿಗಳ ಪ್ರಕಾರ ದೆಹಲಿಗೆ ಉಪಮುಖ್ಯಮಂತ್ರಿಯೂ ದೊರೆಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ....

ಶಾಸಕರನ್ನು ನಿಯಂತ್ರಿಸುವುದೇ ಕೇಜ್ರಿವಾಲ್ ಗಿರುವ ದೊಡ್ಡ ಸವಾಲು: ಪ್ರಶಾಂತ್ ಭೂಷಣ್

ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನು ನಿಯಂತ್ರಿಸುವುದೇ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎದುರಾಗುವ ಬಹುದೊಡ್ಡ ಸವಾಲು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷನ್ ಅಭಿಪ್ರಾಯಪಟ್ಟಿದ್ದಾರೆ. ಬೇರೆ ಪಕ್ಷಗಳಿಂದ ಆಮ್ ಆದ್ಮಿ ಪಕ್ಷಕ್ಕೆ ವಲಸೆ ಬಂದು ಆಯ್ಕೆಯಾಗಿರುವವರು ಪಕ್ಷದ...

ಅರವಿಂದ್ ಕೇಜ್ರಿವಾಲ್- ಪ್ರಧಾನಿ ಮೋದಿ ಭೇಟಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಅದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ನವದೆಹಲಿ 7 ರೇಸ್ ಕೋರ್ಸ್ ರಸ್ತೆಯಲ್ಲಿನ, ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು...

ಫೆ.14ರಂದು ಕೇಜ್ರಿವಾಲ್ ಪದಗ್ರಹಣ: ಪ್ರಧಾನಿ ಮೋದಿಗೆ ಆಹ್ವಾನ

ಆಮ್‌ ಆದ್ಮಿ ಪಕ್ಷದ ನೇತಾರ ಅರವಿಂದ್‌ ಕೇಜ್ರಿವಾಲ್‌, ಫೆ.14ರಂದು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2015ರ ಹೈವೋಲ್ಟೆಜ್ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ನಿರ್ಮಿಸಿದ್ದು, ಕೇಜ್ರಿವಾಲ್ ಸುನಾಮಿ ಅಲೆಯಲ್ಲಿ ಬಿಜೆಪಿ ಕೊಚ್ಚಿಹೋಗಿದೆ. ಕಾಂಗ್ರೆಸ್ ಕೂಡಾ ಧೂಳೀಪಟವಾಗಿದೆ....

ವೆಂಕಯ್ಯ ನಾಯ್ಡು ಭೇಟಿ ಮಾಡಿದ ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಕೇಂದ್ರ ನಗರಾಭಿವೃಧ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೇಜ್ರಿವಾಲ್...

ಕೇಜ್ರಿವಾಲ್ ಗೆ ಪ್ರಧಾನಿ ಮೋದಿ ಅಭಿನಂದನೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರವಿಂದ್ ಕೇಜ್ರಿವಾಲ್ ಗೆ ಅಭಿನಂದನೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಆಪ್ ಗೆಲುವಿಗೆ ಶುಭಕೋರಿದ್ದು, ಕೇಜ್ರಿವಾಲ್ ಅವರಿಗೆ ಚಹಾಗೆ ಬರುವಂತೆ ಆಹ್ವಾನ...

ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ಸರ್ಕಾರ ರಚನೆ ಖಚಿತ

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೊನೆ ಹಂತಕ್ಕೆ ಬಂದು ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಹೊರಬೀಳಲಿದೆ. 56 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿ ಗೆಲುವಿನತ್ತ ನಾಗಾಲೋಟ ಆರಂಭಿಸಿದೆ. ಬಿಜೆಪಿ 12 ಕ್ಷೇತ್ರಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ದ್ 3 ಕ್ಷೇತ್ರಗಳಲ್ಲಿ...

ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿಗೆ ಮುಖಭಂಗ

'ದೆಹಲಿ' ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಾನಗರ ಕ್ಷೇತ್ರದಿಂದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿರಣ್ ಬೇಡಿ ಅವರು ಹೀನಾಯ ಸೋಲನುಭವಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಎಸ್.ಕೆ ಬಗ್ಗಾ ಅವರ ವಿರುದ್ಧ ಕಿರಣ್ ಬೇಡಿ 1,150 ಮತಗಳ ಅಂತರದಿಂದ ಹೀನಾಯ ಸೋಲನುಭವಿಸಿದ್ದಾರೆ....

ಆಮ್ ಆದ್ಮಿ ಪಕ್ಷದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡ

'ದೆಹಲಿ'ಯಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ದೆಹಲಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ತುಳಿಯಲು ಯತ್ನಿಸುತ್ತಿವೆ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ರಾಷ್ಟ್ರೀಯ ಪಕ್ಷಗಳ...

ದೆಹಲಿಯಲ್ಲಿ ಬಿಜೆಪಿ ಹಿನ್ನಡೆ: ಹೈಕಮಾಂಡ್ ಕ್ಷಮೆಯಾಚಿಸಿದ ಕಿರಣ್ ಬೇಡಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ, ಸೋಲಿ ಹೊಣೆ ಹೊತ್ತಿದ್ದು, ಬಿಜೆಪಿ ಹೈಕಮಾಂಡ್ ಕ್ಷಮೆಯಾಚಿಸಿದ್ದಾರೆ. ಕೃಷ್ಣಾಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿರಣ್ ಬೇಡಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಸ್.ಕೆ.ಬಗ್ಗಾ ವಿರುದ್ಧ 2476 ಮತಗಳ ಅಂತರದಿಂದ...

ದೆಹಲಿಯಲ್ಲಿ ಆಪ್ ಸರ್ಕಾರ: ಮತದಾನೋತ್ತರ ಸಮೀಕ್ಷೆ ಭವಿಷ್ಯ

ತೀವ್ರ ಪೈಪೋಟಿಯಿಂದ ಕೂಡಿದ್ದ ದೆಹಲಿ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದ್ದು, ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಭರ್ಜರಿ ಬಹುಮತ ಗಳಿಸಲಿದೆ ಎಂದು ಆರು ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇನ್ನು ಭಾರೀ ನಿರೀಕ್ಷೆ ಹೊಂದಿದ್ದ ಬಿಜೆಪಿ ಎರಡನೇ...

ದೆಹಲಿ ವಿಧಾನಸಭಾ ಚುನಾವಣೆ: ಮತದಾನ ಆರಂಭ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟು 1,33,14,215 ಮತದಾರರು ಸುಮಾರು 673 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕೊರೆಯುವ ಚಳಿಯ ವಾತಾವರಣವಿದ್ದರೂ ರಾಷ್ಟ್ರ ರಾಜಧಾನಿಯ ಹಲವೆಡೆಗಳಲ್ಲಿ ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯ 70 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ....

ದೆಹಲಿ ಚುನಾವಣೆ: ಘಟಾನುಘಟಿಗಳಿಂದ ಮತದಾನ

ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸುಪಡೆದುಕೊಂಡಿದೆ. ಕೊರೆಯುವ ಚೆಳಿಯನ್ನೂ ಲೆಕ್ಕಿಸದೇ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 11ಗಂಟೆಯವರೆಗೆ ಶೇ.19.7ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ. ಈ ನಡುವೆ ರಾಜಕೀಯ ಧುರೀಣರು, ಘಟಾನುಘಟಿ ನಾಯಕರು...

ದೆಹಲಿ ಚುನಾವಣೆ: ಬಿರುಸು ಪಡೆದುಕೊಂಡ ಬಹಿರಂಗ ಪ್ರಚಾರ

ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ದಿನ ಮಾತ್ರ ಬಾಕಿಯಿದೆ. ಈ ನಿಟ್ಟಿನಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಚುನಾವಣಾ ಪ್ರಚಾದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ದೆಹಲಿ ಚುನಾವಣೆ: 3 ಸಮೀಕ್ಷೆಗಳಲ್ಲಿ ಎಎಪಿಗೆ ಹೆಚ್ಚು ಸ್ಥಾನ

ಮೂರು ಪ್ರಮುಖ ಚುನಾವಣಾ ಸಮೀಕ್ಷೆಯ ಒಟ್ಟಾರೆ ಲೆಕ್ಕಾಚಾರದಲ್ಲಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ರ ಆಮ್‌ ಆದ್ಮಿ ಪಕ್ಷ 37 ಸ್ಥಾನಗಳನ್ನು ಪಡೆಯಲಿದ್ದು, ಇದು ಸದನದ ಒಟ್ಟು 70 ಸ್ಥಾನ ಬಲದ ಅರ್ಧಾಂಶಕ್ಕೂ ಹೆಚ್ಚು ಎನ್ನುವುದು ಗಮನಾರ್ಹವಾಗಿದೆ. ಬಿಜೆಪಿಗೆ ಈ...

ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಫಲಿತಾಂಶದ ಬಗ್ಗೆ ಚಿಂತಿಸಿ : ಮೋದಿ

ದೇಶದಲ್ಲಿ ದೆಹಲಿಯಲ್ಲೇ ಅತ್ಯಂತ ಹೆಚ್ಚು ಮತದಾನ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.4ರಂದು ಅಂಬೇಡ್ಕರ್ ನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ದೇಶದಲ್ಲಿ ಅತ್ಯಂತ ಹೆಚ್ಚು ಮತದಾನವಾಗಿರುವುದು ಜಮ್ಮು-ಕಾಶ್ಮೀರದಲ್ಲಿ....

ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಸ್ಪರ್ಧಿಸಬಹುದು: ಚುನಾವಣಾ ಆಯೋಗ

ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮತದಾರರಾಗಿದ್ದು, ಅವರು ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅಭ್ಯರ್ಥಿತ್ವವನ್ನು ರದ್ದುಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ಅಭ್ಯರ್ಥಿ ಕಿರಣ್ ವಾಲಿಯಾ...

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ದೆಹಲಿಯ 16ವರ್ಷಗಳನ್ನು ಹಾಳುಮಾಡಿವೆ: ಮೋದಿ

'ದೆಹಲಿ' ಜನರ ಪ್ರೀತಿ ವಿಶ್ವಾಸಗಳನ್ನು ಅಭಿವೃದ್ಧಿ ರೂಪದಲ್ಲಿ ಬಡ್ಡಿ ಸಮೇತ ವಾಪಸ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.3ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಲೋಕಸಭಾ ಚುನಾವಣೆ...

ದೆಹಲಿ ಚುನಾವಣೆ: ಬಿಜೆಪಿಯಿಂದ ಕೇಜ್ರಿವಾಲ್ ಗೆ ಮತ್ತೆ ಐದು ಪ್ರಶ್ನೆ

ದೆಹಲಿ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದೆಹಲಿ ಬಿಜೆಪಿ, ಆಮ್‌ ಆದ್ಮಿಯ ನೇತಾರ ಅರವಿಂದ ಕೇಜ್ರಿವಾಲ್‌ ಅವರಿಗೆ ಮತ್ತೆ 5 ಪ್ರಶ್ನೆಗಳನ್ನು ಮುಂದಿಟ್ಟಿದೆ. ತಾವು ಪದೇ ಪದೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿ ಸುತ್ತಿರುವುದೇಕೆ? ನಿಮಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ...

ದೆಹಲಿ ಚುನಾವಣೆ: ಆಪ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಫೆ.7ರಂದು ನಡೆಯಲಿರುವ ದೆಹಲಿ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್, ಆಶಿಷ್ ಕೇತನ್ ನೇತೃತ್ವದಲ್ಲಿ ಸಿದ್ಧಗೊಂಡ 70 ಅಂಶಗಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಎಎಪಿ ಈ ಬಾರಿ ಮೊಹಲ್ಲಾ ಸಭಾ...

ದೆಹಲಿ ಚುನಾವಣೆ: ಬಿಜೆಪಿ ಪ್ರಣಾಳಿಕೆಯಿಲ್ಲ; ಕೇಜ್ರಿವಾಲ್ ಗೆ 5 ಪ್ರಶ್ನೆ

ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ವಿಷನ್ ಡಾಕ್ಯುಮೆಂಟ್(ದೂರದೃಷ್ಟಿಯ ದಾಖಲೆ)ಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಈ ವಿಷಯವನ್ನು ಬಿಜೆಪಿ...

ಕಿರಣ್ ಬೇಡಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಕಿರಣ್‌ ಬೇಡಿ ಪ್ರವೇಶಕ್ಕೆ ಮುನ್ನ ದೆಹಲಿ ಬಿಜೆಪಿಯು ಮುಳುಗುವ ಅಂಚಿನಲ್ಲಿತ್ತು. ಇದೀಗ ಬಿಜೆಪಿಯನ್ನು ಸಂಪೂರ್ಣವಾಗಿ ಮುಳುಗಿಸುವಿಕೆಯಲ್ಲಿ ಬೇಡಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಕಿರಣ್ ಬೇಡಿ...

ಆಮಂತ್ರಣ ಬೇಕಿದ್ದರೆ ಕೇಜ್ರಿವಾಲ್ ಬಿಜೆಪಿಗೆ ಸೇರಲಿ: ಕಿರಣ್‌ ಬೇಡಿ ತಿರುಗೇಟು

ಆಮಂತ್ರಣ ಬೇಕಿದ್ದರೆ ಕೇಜ್ರಿವಾಲ್ ಬಿಜೆಪಿಗೆ ಸೇರಲಿ: ಕಿರಣ್‌ ಬೇಡಿ ತಿರುಗೇಟು ಅರವಿಂದ್ ಕೇಜ್ರಿವಾಲ್‌ ಅವರಿಗೆ ಗಣರಾಜ್ಯೋತ್ಸವದ ಆಮಂತ್ರಣ ಬೇಕಿದ್ದರೆ ಬಿಜೆಪಿಗೆ ಸೇರ್ಪಡೆಯಾಗಲಿ ಎಂದು ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಪರೇಡ್‌ನಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಿಲ್ಲ...

ಹಣ ಪಡೆದು ಮತ ಹಾಕಿ ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್

ಚುನಾವಣಾ ಆಯೋಗ ನೀಡಿರುವ ಎಚ್ಚರಿಕೆಯ ಹೊರತಾಗಿಯೂ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಓಟಿಗಾಗಿ ನೀಡುವ ಹಣವನ್ನು ತೆಗೆದುಕೊಂಡು ಎಎಪಿಗೇ ಮತ ಹಾಕಿ ಎಂದು ಪುನರುಚ್ಚರಿಸಿದ್ದಾರೆ. ಈ ಹಿಂದಿನ ಹೇಳಿಕೆಗೆ ಚುನಾವಣೆ ಆಯೋಗವು ಕೇಜ್ರಿವಾಲ್‌ಗೆ...

ಗಣರಾಜ್ಯೋತ್ಸವ ಸಮಾರಂಭಕ್ಕೆ ಕೇಜ್ರಿವಾಲ್ ಗೆ ಆಹ್ವಾನವಿಲ್ಲ

ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸಿಲ್ಲ ಎಂದು ದೆಹಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 66ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಇಚ್ಚೆಯಾಗಿತ್ತು. ಆದರೆ ನನ್ನನ್ನು ಯಾಕೆ ಆಹ್ವಾನಿಸಿಲ್ಲ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಗಣರಾಜ್ಯೋತ್ಸವ ಸಮಾರಂಭಕ್ಕೆ...

ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಂ: ದಿಗ್ವಿಜಯ್ ವಾಗ್ದಾಳಿ

ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ. 2013ರಲ್ಲಿ ದೆಹಲಿಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ ಗೆ ಸಹಾಯ ನೀಡುವ ಮೂಲಕ 'ಕಡಿಮೆ ಕೆಡುಕನ್ನು' ಆಯ್ಕೆ ಮಾಡಿಕೊಂಡಿತ್ತು ಎಂದು...

ಹೇಳಿಕೆ ಸಮರ್ಥಿಸಿಕೊಂಡ ಅರವಿಂದ್ ಕೇಜ್ರಿವಾಲ್

ದೆಹಲಿ ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಹಣ ಪಡೆದು ಆಪ್ ಪಕ್ಷಕ್ಕೆ ವೋಟ್ ಮಾಡುವಂತೆ ಕರೆ ಕೊಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಆ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯವನ್ನು ಶುದ್ಧಗೊಳಿಸಲು ನೀಡಿದ ಪ್ರತಿಕ್ರಿಯೆ ಅದು ಎಂದು...

ದೆಹಲಿ ಚುನಾವಣೆ: ಆಸ್ತಿ ವಿವರ ಘೋಷಿಸಿದ ಕಿರಣ್ ಬೇಡಿ, ಕೇಜ್ರಿವಾಲ್

ದೆಹಲಿಯ ಕೃಷ್ಣಾನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಹುರಿಯಾಳಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ, 11.65 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ಇವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ತಮ್ಮ ಒಟ್ಟು ಆಸ್ತಿ ಮೌಲ್ಯದ ಪೈಕಿ 11,04,02,677...

ಬಹಿರಂಗ ಚರ್ಚೆಗೆ ಬರಲು ಸಿದ್ಧ: ಕಿರಣ್ ಬೇಡಿ

ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೀಡಿದ್ದ ಸವಾಲು ಸ್ವೀಕರಿಸಿರುವ ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ, ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು...

ಚುನಾವಣಾ ಆಯೋಗದಿಂದ ಕೇಜ್ರಿವಾಲ್ ಗೆ ನೊಟೀಸ್

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹಣ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪಡೆದು, ಮತ ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ನೀಡಬೇಕೆಂದು ಕರೆ ನೀಡಿದ್ದ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ....

ಕೇಜ್ರಿವಾಲ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಬಿಜೆಪಿ, ಕಾಂಗ್ರೆಸ್ ನವರು ಹಣ ನೀಡಿದರೆ ತೆಗೆದುಕೊಳ್ಳಿ ಎಂಬ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೆಹಲಿಯ ಉತ್ತಮ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿ...

ಮುಳುಗುತ್ತಿರುವ ಬಿಜೆಪಿ ದೋಣಿಯನ್ನು ಕಿರಣ್ ಬೇಡಿ ಕಾಪಾಡಲು ಸಾಧ್ಯವೇ: ಕೇಜ್ರಿವಾಲ್

ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಮುಳುಗುತ್ತಿರುವ ಬಿಜೆಪಿ ದೋಣಿಯನ್ನು ಕಾಪಾಡಲು ಕಿರಣ್ ಬೇಡಿ ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಣ್ಣಾ ಹಜಾರೆ ಅವರೊಂದಿಗೆ ಹೋರಾಟ ನಡೆಸುತ್ತಿದ್ದ...

ದೆಹಲಿ ಚುನಾವಣೆ: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆ

ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ದೆಹಲಿ ಚುನಾವಣೆ ಎದುರಿಸುವುದು ಖಚಿತವಾಗಿದೆ. ಜ.15ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆಗೊಂಡರು. ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಅವರು ಆಮ್ ಆದ್ಮಿ ಪಕ್ಷದ...

ಅರವಿಂದ್ ಕೇಜ್ರಿವಾಲ್ ದೆಹಲಿ ನಿವಾಸಿಯಲ್ಲ: ಮೌಲಿಕ್ ಭಾರತ್ ಟ್ರಸ್ಟ್

ದೆಹಲಿ ಚುನಾವಣೆ ಎದುರಾಗುತ್ತಿದ್ದಂತೆಯೇ ಆಪ್ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಹೊಸ ಸಂಕಷ್ಟ ಎದುರಾಗಿದೆ. ದೆಹಲಿಯ ಮೌಲಿಕ್ ಭಾರತ್ ಎಂಬ ಎನ್.ಜಿ.ಒ ಸಂಸ್ಥೆ ಅರವಿಂದ್ ಕೇಜ್ರಿವಾಲ್ ದೆಹಲಿಯವರಲ್ಲ ಎಂದು ಆರೋಪಿಸಿದೆ. ಕೇಜ್ರಿವಾಲ್ ಮತದಾರರ ಗುರುತಿನ ಚೀಟಿಯಲ್ಲಿ ತಮ್ಮ ವಿಳಾಸವನ್ನು ಬದಲಿಸಬೇಕೆಂದು...

ನಾನು ನಕ್ಸಲ್‌ನಂತೆ ಕಾಣ್ತಿದ್ದೀನಾ? : ಪ್ರಧಾನಿಗೆ ಕೇಜ್ರಿವಾಲ್ ಪ್ರಶ್ನೆ

ನಾನೇನು ನಕ್ಸಲ್‌ನಂತೆ ಕಾಣುತ್ತಿದ್ದೇನಾ? ಎಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್, ನಾನೇನು ನಕ್ಸಲ್‌ನಂತೆ ಕಾಣುತ್ತಿದ್ದೇನಾ? ನಾನು ದೆಹಲಿಯ ಜನರಲ್ಲಿ ಕೇಳಲಚ್ಛಿಸುತ್ತೇನೆ. ನಾನು ಕಾಡಿಗೆ ಹೋಗಲಿ ಎಂದು ಪ್ರಧಾನಿ ಹೇಳುತ್ತಿದ್ದಾರೆ, ದೆಹಲಿಯ ಜನರು...

ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಆಪ್ ವಿರುದ್ಧ ಟೀಕಾ ಪ್ರಹಾರ ಮಾಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ನಡುಕ ಇದೆ ಎಂದಿದ್ದಾರೆ. ರ್ಯಾಲಿಯಲ್ಲಿ ಬಿಜೆಪಿ ನಾಯಕರನ್ನು ನೋಡಿದರೆ ಅವರ ಪಕ್ಷಕ್ಕೆ ನಡುಕವಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ....

ದೆಹಲಿಯಲ್ಲಿ ಬಿಜೆಪಿಗೆ ಸೂಕ್ತ ನಾಯಕತ್ವ ಇಲ್ಲ: ಅರವಿಂದ್ ಕೇಜ್ರಿವಾಲ್

'ಜಮ್ಮು-ಕಾಶ್ಮೀರ', ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೆಹಲಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಬಿಜೆಪಿಯಲ್ಲಿ ಸೂಕ್ತ ನಾಯಕತ್ವ, ಅಜೆಂಡಾ ಇಲ್ಲ, ಬಿಜೆಪಿಯದ್ದು...

ಬಿಸ್ನೆಸ್ ಕ್ಲಾಸ್ ಏರ್ ಟಿಕೆಟ್ ನಲ್ಲಿ ದುಬೈಗೆ ಹಾರಿದ ಆಮ್ ಆದ್ಮಿ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಯಾವುದೇ ಅಧಿಕಾರ ಹೊಂದದೇ ದೆಹಲಿಯಿಂದ ದುಬೈಗೆ ತೆರಳುವ ವಿಮಾನದಲ್ಲಿ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿ ಆಮ್ ಆದ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ರಕ್ಷಣಾ ಸಚಿವ ಮನೋಹರ್...

ವ್ಯಾಟ್ ಸುಧಾರಣೆಯ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್

ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮೊದಲು ಪಕ್ಷದ ವ್ಯಾಪಾರಿಗಳ ವಿಭಾಗ ಆಯೋಜಿಸಿದ್ದ ಪಕ್ಷದ ನಿಧಿ ಸಂಗ್ರಹ ಔತಣಕೂಟದಲ್ಲಿ ಎಎಪಿ ಪಕ್ಷ 50 ಲಕ್ಷ ರೂ ಸಂಗ್ರಹಿಸಿದೆ. ಬೇರೆ ರಾಜ್ಯಗಳಿಗಿಂತ ಮೌಲ್ಯಾಧಾರಿತ ತೆರಿಗೆ ಹೆಚ್ಚಿರುವ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಿ ವ್ಯಾಟ್ ಮೇಲೆ...

ದೆಹಲಿ ವಿಧಾನಸಭಾ ಚುನಾವಣೆ: ಎ.ಎ.ಪಿಯಿಂದ ಹೊಸ ಧ್ಯೇಯಘೋಷ ಬಿಡುಗಡೆ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ, ಯುವಕರನ್ನು ಸೆಳೆಯಲು ಭರಪೂರ ಭರವಸೆಗಳನ್ನು ನೀಡಿದೆ. ಜೊತೆಗೆ 5 ವರ್ಷ ಕೇಜ್ರಿವಾಲ್ ಎಂಬ ಹೊಸ ಧ್ಯೇಯಘೋಷವನ್ನೂ ಬಿಡುಗಡೆ ಮಾಡಿದೆ. ಜಂತರ್‌ ಮಂತರ್‌ನಲ್ಲಿ ಆಯೋಜಿಸಿದ್ದ...

ಸಮೀಕ್ಷೆ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ

ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ...

ವೆಬ್ ಸೈಟ್ ನಲ್ಲಿ ಮೋದಿ ಭಾವಚಿತ್ರ, ಪಕ್ಷ ವಿರೋಧಿಗಳ ಕುತಂತ್ರ: ಆಪ್ ಸ್ಪಷ್ಟನೆ

ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಮೋದಿ ಭಾವಚಿತ್ರ ಪಕಟಿಸುವ ಮೂಲಕ ಪ್ರಚಾರ ನಡೆಸಿ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಆಮ್ ಆದ್ಮಿ ಪಕ್ಷ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ನಮ್ಮ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ...

ಆಮ್ ಆದ್ಮಿ ಪಕ್ಷದ ವೆಬ್ ಸೈಟಲ್ಲಿ ಮೋದಿ ಚಿತ್ರ: ಚುನಾವಣೆ ಗೆಲ್ಲಲು ಆಪ್ ಹೊಸತಂತ್ರ

'ಬಿಜೆಪಿ'ಗೆ ತಾಕತ್ ಇದ್ದರೆ ದೆಹಲಿ ಚುನಾವಣೆ ಎದುರಿಸಿ ಗೆಲ್ಲಲಿ ಎಂದು ಸವಾಲೆಸದವರು ಬಿಜೆಪಿ ಪ್ರಧಾನಿಯನ್ನೇ ಬಳಸಿಕೊಂಡು ಅದಕ್ಕಿಂತಲೂ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ! ಇಂತಹ ಮಾಸ್ಟರ್ ಮೈಂಡ್ ಯಾರದ್ದು ಅಂದ್ಕೊಂಡ್ರಾ? ಇನ್ಯಾರದ್ದು, ಸರ್ಕಾರ ರಚಿಸಿ 49ನೇ ದಿನಗಳಲ್ಲಿ ರಾಜೀನಾಮೆ ನೀಡಿದ್ದ ಆಮ್ ಆದ್ಮಿ...

ದೆಹಲಿ ವಿಧಾನಸಭೆ ವಿಸರ್ಜನೆಗೆ ಸಚಿವ ಸಂಪುಟ ಅಸ್ತು, ಫೆಬ್ರವರಿಯಲ್ಲಿ ಚುನಾವಣೆ ಸಾಧ್ಯತೆ

'ದೆಹಲಿ' ವಿಧಾನಸಭೆ ವಿಸರ್ಜನೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. 2015ಫೆಬ್ರವರಿ ವೇಳೆಗೆ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸರ್ಕಾರ ರಚನೆ ಮಾಡಲು ಬಿಜೆಪಿ ನಿರಾಕರಿಸಿದ ಕಾರಣ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ನಜೀಬ್ ಜಂಗ್ ಶಿಫಾರಸ್ಸು...

ನರೇಂದ್ರ ಮೋದಿ ಓರ್ವ ಮಹಾನ್ ವಾಗ್ಮಿ: ಅರವಿಂದ್ ಕೇಜ್ರಿವಾಲ್

ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಲ್ಲಿ ಮತ್ತೊಮ್ಮೆ ಮೋದಿ ಅಲೆ ಕೆಲಸ ಮಾಡಿರುವುದರ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಗಳೂ ಹೊಗಳಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೇ ಇಂದಿರಾ ಗಾಂಧಿ ಆಪ್ತ, ಶಿಕ್ಷಣ ತಜ್ನ ಲೋಕೇಶ್ ಚಂದ್ರ ಅವರು ಪ್ರಧಾನಿ ಮೋದಿ ಅವರನ್ನು ಭಗವಂತನ...

ದೆಹಲಿಯಲ್ಲಿ ಸರ್ಕಾರ ರಚನೆ ಸಾಧ್ಯತೆ: ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬಹುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಸೂಚನೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ರಾಷ್ಟ್ರಪತಿ ಸೂಚನೆ ಹಿನ್ನಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಸರ್ಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡುವ ಸಾಧ್ಯತೆಯಿದೆ. ಈ...

ದೆಹಲಿಯಲ್ಲಿ ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಬಿಜೆಪಿಗೆ ಆಹ್ವಾನ ಸಾಧ್ಯತೆ

'ದೆಹಲಿ'ಯಲ್ಲಿ ಮತ್ತೆ ಸರ್ಕಾರ ರಚನೆ ಕಸರತ್ತು ನಡೆಯಲಿದೆ. ಅತಂತ್ರ ರಾಜಕೀಯ ಸ್ಥಿತಿ ಎದುರಿಸುತ್ತಿರುವ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ಲೆಫ್ಟಿನೆಂಟ್ ಗೌರ್ನರ್ ಬಿಜೆಪಿಯನ್ನು ಆಹ್ವಾನಿಸಲಿದ್ದಾರೆ. ಉನ್ನತ ಮೂಲಗಳ ಪ್ರಕಾರ, ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್, ಬಹುಮತವಿಲ್ಲದಿದ್ದರೂ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ...

ದೆಹಲಿಯಲ್ಲಿ ಬಿಜೆಪಿ ನಕಲಿ ಮತದಾರರನ್ನು ಸೃಷ್ಠಿಸುತ್ತಿದೆ: ಕೇಜ್ರಿವಾಲ್ ಆರೋಪ

ಬಿಜೆಪಿ ಹಿರಿಯ ನಾಯಕರೊಬ್ಬರು ದೆಹಲಿಯ ಪ್ರತಿ ಕ್ಷೆತ್ರದಲ್ಲು ನಕಲಿ ಮತದಾರರನ್ನು ಸೃಷ್ಠಿಸಿ ಗೆಲ್ಲಲು ತನ್ನ ಅಭ್ಯರ್ಥಿಗಳಿಗೆ ಸುಚಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೆಜ್ರಿವಾಲ್ ಆರೊಪ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅರವಿಂದ್ ಕೆಜ್ರಿವಾಲ್, ಬಿಜೆಪಿ ಹಿರಿಯ ನಾಯಕರೊಬ್ಬರು...

ಬಿಜೆಪಿಗೆ ಧೈರ್ಯವಿದ್ದರೆ ದೆಹಲಿ ಚುನಾವಣೆ ಎದುರಿಸಲಿ:ಅರವಿಂದ್ ಕೇಜ್ರಿವಾಲ್

ಮಹಾರಾಷ್ಟ್ರ, ಹರ್ಯಾಣದ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತ ಬೆನ್ನಲ್ಲೇ ದೆಹಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸುವಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದ್ದಾರೆ. ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿಗೆ ದೆಹಲಿ ಚುನಾವಣೆ...

ಪ್ರಧಾನಿ ನಿವಾಸದ ಬಳಿ ಸ್ವಚ್ಛತಾ ಅಭಿಯಾನ ಕೈಗೊಂಡ ಅರವಿಂದ್ ಕೇಜ್ರಿವಾಲ್

ಗಾಂಧಿ ಜಯಂತಿ ಅಂಗವಾಗಿ ಅತ್ತ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದರೆ ಇತ್ತ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನಿವಾಸದ ಬಳಿಯೇ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೆಹಲಿಯಲ್ಲಿ ಪ್ರತ್ಯೇಕವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿರುವ...

ದೆಹಲಿ ರಾಜ್ಯಪಾಲರ ವಿರುದ್ಧ ಕೇಜ್ರಿವಾಲ್ ಆರೋಪ

'ಆಮ್ ಆದ್ಮಿ ಪಕ್ಷ'ದ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ರಾಜ್ಯಪಾಲರ ಮೇಲೆ ಆರೋಪ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿರುವ ಜಮ್ಮು-ಕಾಶ್ಮೀರಕ್ಕೆ ಸಹಾಯ ಧನ ಕಳಿಸದಂತೆ ತಮ್ಮ ಪಕ್ಷ ಶಾಸಕರನ್ನು ದೆಹಲಿ ರಾಜ್ಯಪಾಲ ನಜೀಬ್ ಜಂಗ್ ತಡೆಯುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ....

ಪ್ರಧಾನಿ ಮೋದಿ ಶ್ಲಾಘಿಸಿದ ಕುಮಾರ್ ವಿಶ್ವಾಸ್

ದೆಹಲಿಯಲ್ಲಿ ತಮಗೆ ಸಿಎಂ ಆಗಲು ಬಿಜೆಪಿ ಆಫರ್ ನೀಡಿದೆ ಎಂಬ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್, ಈಗ ಅರವಿದ್ ಕೇಜ್ರಿವಾಲ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಮೋದಿಯವರ ಜಪಾನ್...

ಆಮ್ ಆದ್ಮಿ ಪಕ್ಷದಿಂದ ಲೆಫ್ಟಿನೆಂಟ್ ಗವರ್ನರ್ ಭೇಟಿ

ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಯಲು ಮುಂದಾಗಿರುವ ಆಮ್ ಆದ್ಮಿ ಪಕ್ಷದ ನಾಯರು, ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಿದ್ದಾರೆ. ಎ.ಎ.ಪಿ ನಾಯಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿಯಾಗಿ, ದೆಹಲಿ...

ಆಪ್ ಶಾಸಕನಿಗೆ ಹಣದ ಆಮಿಷಃ ಬಿಜೆಪಿ ಮುಖಂಡನಿಗೆ ನೊಟೀಸ್ ಜಾರಿ

'ಆಮ್ ಆದ್ಮಿ ಪಕ್ಷ' ಬಿಜೆಪಿ ವಿರುದ್ಧ ಬಿಡುಗಡೆ ಮಾಡಿರುವ ಸಿ.ಡಿಯಲ್ಲಿ ಬಿಜೆಪಿ ಮುಖಂಡ ಶೇರ್‌ ಸಿಂಗ್ ದಾಗರ್ ಕಾಣಿಸಿಕೊಂಡಿರುವುದರಿಂದ ಅವರಿಗೆ ಪಕ್ಷ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ದೆಹಲಿಯಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಹಿರಿಯ ಮುಖಂಡರು ಆಪ್ ಶಾಸಕರಿಗೆ ಹಣದ...

ಎ.ಎ.ಪಿಯಿಂದ ಸೆ.10ರಂದು ಲೆಫ್ಟಿನೆಂಟ್ ಗವರ್ನರ್ ಭೇಟಿ

ದೆಹಲಿಯಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸೆ.10ರಂದು ಲೆಫ್ಟಿನೆಂಟ್ ಗವರ್ನರ್ ನಜೀಮ್ ಜಂಗ್ ಅವರನ್ನು ಭೇಟಿ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಗಾಜಿಯಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ನಡೆಸಿದ್ದು,...

ಆಪ್ ನ ದೆಹಲಿ ಶಾಸಕರ ಖರೀದಿ ಆರೋಪ ತಳ್ಳಿಹಾಕಿದ ಬಿಜೆಪಿ

'ದೆಹಲಿ'ಯಲ್ಲಿ ಸರ್ಕಾರ ರಚನೆಗೆ ಕಸರತ್ತು ನಡೆಸಿರುವ ಬಿಜೆಪಿ ಆಪ್ ಪಕ್ಷದ ಶಾಸಕರನ್ನು ಖರೀದಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಆಮ್ ಆದ್ಮಿ ಪಕ್ಷದ ಶಾಸಕರಿಗೆ ಬಿಜೆಪಿ ಆಮಿಷವೊಡ್ಡುತ್ತಿರುವ ವಿಡಿಯೋ ಒಂದನ್ನು ಆಪ್ ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಸರ್ಕಾರ ರಚನೆಗೆ...

ನಿತಿನ್ ಗಡ್ಕರಿ ಜತೆ ರಾಜಿಗೆ ಮುಂದಾದ ಕೇಜ್ರಿವಾಲ್

ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡ್ಕರಿ ಜತೆ ರಾಜಿಗೆ ಒಪ್ಪಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಎ.ಎ.ಪಿ ನೇತಾರ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಪ್ರತಿಷ್ಠೆಗಾಗಿ ನಡೆಯುತ್ತಿರುವ ಪ್ರಕರಣವಾದ್ದರಿಂದ ಎರಡೂ...

ದೆಹಲಿಯಲ್ಲಿ ಮರು ಚುನಾವಣೆಗೆ ಆಮ್ ಆದ್ಮಿ ಪಟ್ಟು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ರಚನೆಯ ಯತ್ನಕ್ಕೆ ಚಾಲನೆ ದೊರೆತಿದೆ. ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡುವ ಸಾಧ್ಯತೆಯಿದೆ. ಆದರೆ ಆಮ್ ಆದ್ಮಿ ಪಕ್ಷ ಮರು ಚುನಾವಣೆಗೆ ಪಟ್ಟು ಹಿಡಿದಿದೆ. ರಾಜಧಾನಿಯಲ್ಲಿ ಮರು ಚುನಾವಣೆ ಅಗತ್ಯವಿದೆ. ಮೈತ್ರಿ ಸರ್ಕಾರದಿಂದ ಭ್ರಷ್ಟಾಚಾರ...

ಅರವಿಂದ್ ಕೇಜ್ರಿವಾಲ್ ಪಕ್ಷದ ಸಂಚಾಲಕ ಹುದ್ದೆ ತೊರೆಯಲಿ: ಶಾಂತಿ ಭೂಷಣ್

ಲೋಕಸಭಾ ಚುನಾವಣೆಯ ಸೋಲಿನಿಂದ ಹೊರ ಬಂದು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮೋಡಿ ಮಾಡಲು ಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನಾಯಕತ್ವದ ವಿರುದ್ಧ ಪಕ್ಷದ ಹಿರಿಯ ನಾಯಕ ಶಾಂತಿ ಭೂಷಣ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ...

ಆಮ್ ಆದ್ಮಿ ಪಕ್ಷದ ಸೈಟ್ ನಲ್ಲಿ ಇಟಲಿ ಧ್ವಜ!

'ಆಮ್ ಆದ್ಮಿ ಪಕ್ಷ'ದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಯಾವ ದೇಶದವರು? ಇದೆಂಥ ಪ್ರಶ್ನೆ ಅಂತ ಕುತೂಹಲ ಮೂಡಿದ್ದರೆ ಒಮ್ಮೆ ಆಮ್ ಆದ್ಮಿ ಪಕ್ಷದ ಅಧಿಕೃತ ವೆಬ್ ಸೈಟ್ ನೋಡಿ ಬನ್ನಿ, ನೀವು ಇದೇ ಪ್ರಶ್ನೆ ಕೇಳುತ್ತೀರಾ.. ವಿವಾದಗಳಿಂದಲೇ ಗುರುತಿಸಿಕೊಂಡಿರುವ ಆಮ್ ಆದ್ಮಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited